ಅಜಯ್ ರಾವ್‌ ಕನ್ನಡ ಚಲನಚಿತ್ರದ ಪ್ರಸಿದ್ಧ ನಟ. ಪ್ರೇಮ್ ನಿರ್ದೇಶನದ ೨೦೦೩ ರ ಬ್ಲಾಕ್ಬಸ್ಟರ್ ಎಕ್ಸ್‌ಕ್ಯೂಸ್‌ ಮಿ ಚಿತ್ರದ ಮೂಲಕ ನಟ ಸುನಿಲ್ ರಾವ್ ರೊಂದಿಗೆ ಚಿತ್ರ ರಂಗ ಪ್ರವೇಶ ಮಾಡಿದರು. == ವೃತ್ತಿ == ಅಜಯ್ ರಾವ್ ಅವರು "ಎಕ್ಸ್‌ಕ್ಯೂಸ್ ಮಿ" (೨೦೦೩) ಚಿತ್ರದ ಮೂಲಕ ನಾಯಕರಾಗಿ ಪಾದಾರ್ಪಣೆ ಮಾಡಿದರು ಮತ್ತು ನಂತರ "ತಾಜ್ ಮಹಲ್" (೧೦೦೮), "ಕೃಷ್ಣನ್ ಲವ್ ಸ್ಟೋರಿ" (೨೦೧೦), "ಕೃಷ್ಣನ್ ಮ್ಯಾರೇಜ್ ಸ್ಟೋರಿ" (೨೦೧೧) ಮತ್ತು ಕೃಷ್ಣ ಲೀಲಾ (೨೦೧೫) ಮುಂತಾದ ಚಿತ್ರಗಳಲ್ಲಿ ಕಾಣಿಸಿಕೊಂಡರು. ಕೃಷ್ಣ ಲೀಲಾ (೨೦೧೫) ದೊಂದಿಗೆ ಅವರು ತಮ್ಮ ಹೋಮ್ ಬ್ಯಾನರ್ ಶ್ರೀ ಕೃಷ್ಣ ಆರ್ಟ್ಸ್ ಅಂಡ್ ಕ್ರಿಯೇಷನ್ಸ್ ಅನ್ನು ಪ್ರಾರಂಭಿಸಿದರು. ಈ ಮೂಲಕ ಅವರು ನಿರ್ಮಾಪಕರಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. == ವೈಯಕ್ತಿಕ ಜೀವನ == ಅವರು ತಮ್ಮ ದೀರ್ಘಕಾಲದ ಗೆಳತಿ ಸಪ್ನಾ ಅವರನ್ನು ೧೮ ಡಿಸೆಂಬರ್ ೨೦೧೪ ರಂದು ವಿವಾಹವಾದರು. ಅವರ ಮಗಳು ಚೆರಿಷ್ಮಾ. == ಚಲನಚಿತ್ರಗಳು == == ಬಾಹ್ಯ ಸಂಪರ್ಕ == ಫಿಲ್ಮೀಬೀಟ್ ಜಾಲತಾಣದಲ್ಲಿ ಅಜಯ್ ರಾವ್ ವಿವರ 2022-05-20 ವೇಬ್ಯಾಕ್ ಮೆಷಿನ್ ನಲ್ಲಿ. == ಉಲ್ಲೇಖಗಳು ==